ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಕೆಲವು ಜನರು ಈ ಒಂದು ಶಬ್ದಗಳಿಗೆ ಅಂಜುತ್ತಾರೆ ಆ ಶಬ್ದ ಬೇರೆ ಯಾವುದೂ ಅಲ್ಲ ಈ ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ಒಂದು ವೇಳೆ ನೀವು ಯಾವುದಾದರೂ ಒಂದು ಬಯಲಿನಲ್ಲಿದ್ದರೆ ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ನೀವು ಕುಳಿತುಕೊಳ್ಳಿ ಯಾವುದೇ ಕಾರಣಕ್ಕೂ ನಿಲ್ಲಬೇಡಿ ಈ ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ ಇದು ಮಿಂಚಿನಿಂದ ಮೆದುಳಿಗೂ ಹೃದಯಕ್ಕೂ ಆಗುವ ದೊಡ್ಡ ರೀತಿಯ ಹಾನಿಯನ್ನು ತಪ್ಪಿಸುತ್ತದೆ ಈ ಒಂದು ಸುಲಭ ಉಪಾಯವನ್ನು ಯಾವಾಗಲೂ ನಿಮ್ಮ ತಲೆಯಲ್ಲಿ ಇಟ್ಟುಕೊಳ್ಳಿ ಪ್ರಿಯ ಮಿತ್ರರೇ ಒಂದು ವೇಳೆ ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ ಅಲ್ಲಿಂದ ತಡಮಾಡದೆ ತಕ್ಷಣಕ್ಕೆ ಹೊರಬರುವುದು ಒಳ್ಳೆಯದು ಕಾರಣ ಸಿಡಿಲು.
ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ ಹಾಗಾಗಿ ನೀವು ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿಯಿರಿ ಮತ್ತು ನೀವು ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ ಕಾರಣ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಬೇಗ ಆಯ್ಕೆ ಮಾಡಿಕೊಳ್ಳುತ್ತದೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಮಳೆ ಬರುವ ಸಂದರ್ಭದಲ್ಲಿ ಈ ಗುಡುಗು-ಮಿಂಚು ಸಂಭವಿಸಿದರೆ ನೀವು ಕೆರೆಯಲ್ಲಿ ಈಜುವುದು ಮತ್ತು ಸ್ನಾನ ಮಾಡುವುದು ಬೇಡ ಹಾಗೇನಾದರೂ ನೀವು ನೀರಿನಲ್ಲಿದ್ದರೆ ತಕ್ಷಣ ಹೊರಬರಬೇಕು ಮತ್ತು ವಿದ್ಯುತ್ ಕಂಬ ಎಲಕ್ಟ್ರಿಕಲ್ ಟವರ್ ಮತ್ತು ಮೊಬೈಲ್ ಟವರ್ ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಯಾವುದೇ ಕಾರಣಕ್ಕೂ ಇರಬೇಡಿ ಮತ್ತು ತಂತಿಬೇಲಿ ಬಟ್ಟೆ ಒಣಹಾಕುವ ತಂತಿ ಇವುಗಳಿಂದ ಸಾಧ್ಯವಾದಷ್ಟು ದೂರವಿರಿ.
ಈ ಮಳೆ ಬರುವ ಸಮಯದಲ್ಲಿ ನಿಮ್ಮ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸವನ್ನು ಮಾಡಬೇಡಿ ಮತ್ತು ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ನಿಮಗೆ ಬಾಳ ಸುರಕ್ಷತೆ ಪ್ರಿಯ ಮಿತ್ರರೇ ಇನ್ನು ಅಪ್ಪಿತಪ್ಪಿಯೂ ಈ ಗುಡುಗು ಸಿಡಿಲಿನ ಸಂದರ್ಭದಲ್ಲಿ ಯಾರಿಗೂ ಫೋನ್ ಮಾಡಬೇಡಿ ಅದನ್ನು ಚಾರ್ಜ್ ಮಾಡುವ ಸಾಹಸವೂ ಕೊಡಾ ಬೇಡ ಮತ್ತು ಒಂದು ವೇಳೆ ನೀವು ಕಾರಿನಲ್ಲಿ ಎಲ್ಲಿಗಾದರೂ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ ಮತ್ತು ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಮುಟ್ಟದೆ ನೀವು ಮಧ್ಯದಲ್ಲಿ ಕುಳಿತುಕೊಳ್ಳುವುದು ಸುರಕ್ಷತೆಯ ಕೆಲಸ ಮತ್ತು ನಿಮ್ಮ ಕಂಪ್ಯೂಟರ್ ಗಳಿಂದ ದೂರ ಇರಿ ಮತ್ತು ಮನೆಯ.
ಕಾಂಕ್ರೀಟ್ ಗೋಡೆಗಳನ್ನು ಮುಟ್ಟದೆ ನಿಮ್ಮ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ ಪ್ರಿಯ ಮಿತ್ರರೇ ಈ ಮಳೆ ಬರುವ ಸಂದರ್ಭದಲ್ಲಿ ಈ ರೀತಿಯ ಎಚ್ಚರಿಕೆಯ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ನೀವು ತಪ್ಪದೆ ಪಾಲಿಸಿ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಈ ಉಪಯುಕ್ತ ಮಾಹಿತಿಯಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಮಳೆಬರುವ ಸಂದರ್ಭದಲ್ಲಿ ಈ ಗುಡುಗು-ಸಿಡಿಲು ಬರುವ ಸಂದರ್ಭದಲ್ಲಿ ಈ ಸೂಕ್ತ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ನೀವು ಕೂಡ ಪಾಲಿಸಿ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.