ಆಕೆ ಕೊನೆಯ ಬಾರಿ ಕರೆ ಮಾಡಿದ್ದು ಕನ್ನಡದ ಯಾವ ದೊಡ್ಡ ನಟನೆಗೆ ಗೊತ್ತಾ ಸಿಲ್ಕ್ ಸ್ಮಿತಾ ಜೀವನದ ಕಥೆ ವಿಡಿಯೋ ನೋಡಿ!

in Uncategorized 147 views

ನಮಸ್ಕಾರ ಪ್ರಿಯ ವೀಕ್ಷಕರೇ ಸಿಲ್ಕ್ ಸ್ಮಿತಾ ದಕ್ಷಿಣ ಭಾರತದ ಸೆಕ್ಸ್ ಬಾಂಬ್ ಎಂದೇ ಗುರುತಿಸಿಕೊಂಡ ಈ ಖ್ಯಾತ ನಟಿ ಸರಿ ಸುಮಾರು 2 ದಶಕಗಳ ಕಾಲ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ಹೆಗ್ಗಳಿಕೆ ಈ ನಟಿಗೆ ಸೇರುತ್ತದೆ ಅದು ಎಂತಹದೇ ಕಳಪೆ ಚಿತ್ರವಾಗಲಿ ಆ ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಅವರದು ಒಂದು ಚಿಕ್ಕ ಚಿಕ್ಕ ಪಾತ್ರ ಇದೆ ಎಂದರೆ ಸಾಕು ಆ ಚಿತ್ರವನ್ನು ನೋಡಲು ಜನರು ಮುಗಿ ಬೀಳುತ್ತಿದ್ದ ಕಾಲವದು ದುಂಡು ಮೈಕಟ್ಟಿನ ಈ ಕೃಷ್ಣ ಸುಂದರಿಯನ್ನು ನೋಡಲು ಜನರು ಥಿಯೇಟರ್ ಹತ್ತಿರ ದೌಡಾಯಿಸುತ್ತಿದ್ದರು ಮತ್ತು ಸಿಲ್ಕ್ ಸ್ಮಿತಾ ಅವರು ಸಹ ಕಲಾವಿದೆಯಾಗಿ ಅಥವಾ ಕ್ಯಾಬರೆ ಡ್ಯಾನ್ಸರ್ ಆಗಿದ್ದರೂ ಕೂಡ ಅಸಂಖ್ಯಾತ. ಯುವಕರ ಡ್ರೀಮ್ ಗರ್ಲ್ ಆಗಿದ್ದಳು ಮತ್ತು ಸಿಲ್ಕ್ ಸ್ಮಿತಾ ಅವರು ಮೂಲತಹ ಆಂಧ್ರದವರು ಅಲ್ಲಿನ ಪಕ್ಷಿಮ ಗೋದಾವರಿ ಜಿಲ್ಲೆಯ ಎಲ್ಲೂರಿನಲ್ಲಿ 1960 ಡಿಸೆಂಬರ್ 2 ರಲ್ಲಿ ರಾಮುಲು ಹಾಗೂ ಸರಸಮ್ಮ ಅವರಿಗೆ ಜನಿಸಿದ ಸಿಲ್ಕ್ ಸ್ಮಿತಾ ಆ ಬಡ ಕುಟುಂಬದ ಹೆಣ್ಣು ಈ ಕುಟುಂಬ ನಿಭಾಯಿಸುವುದಕ್ಕೆ ತನ್ನ ಹತ್ತನೇ ವಯಸ್ಸಿನಲ್ಲಿ ಶಾಲೆಯನ್ನು ಸಂಪೂರ್ಣವಾಗಿ ತೊರೆದು ಸಿಲ್ಕ್ ಸ್ಮಿತಾ ಅವ್ರು ಚಿಕ್ಕಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡರು ಕಪ್ಪುವರ್ಣದ ಬಾಲಕಿ ಆದರೂ ಮೈಕೈ ತುಂಬಿಕೊಂಡು ನೋಡೋದಕ್ಕೆ ಆಕರ್ಷಕವಾಗಿದ್ದ ಆಕೆಯ ಮೈಮಾಟವೇ ಶಾಪದಂತೆ ಪರಿಣಮಿಸಿ ಚಿಕ್ಕವಯಸ್ಸಿನಲ್ಲಿ ಈಕೆಗೆ ಬಾಲ್ಯವಿವಾಹ ಮಾಡಲಾಯಿತು ಮದುವೆಯಾದ ಬಳಿಕವೂ ಈಕೆಗೆ ಸಂಕಷ್ಟ ತಪ್ಪಲಿಲ್ಲ ಆಕೆಯ ಗಂಡ ಮತ್ತು ಅತ್ತೆಯ.

ಮನೆಯವರ ಕಾಟ ತಾಳದೇ ಬಾಲಕಿ ಸ್ಮಿತ ಆ ಮನೆ ಮತ್ತ ಆ ಊರನ್ನು ಬಿಟ್ಟು ಹೊರಟುಹೋದರು ಅಲ್ಲಿಂದ ಸಿಲ್ಕ್ ಸ್ಮಿತಾ ಅವರು ಬಂದಿದ್ದು ಚೆನ್ನೈಗೆ ಮೊದಮೊದಲು ಚಿಕ್ಕ ಟಚಪ್ ಕಲಾವಿದೆಯಾಗಿ ಇತರೆ ನಟಿಯರಿಗೆ ಬಣ್ಣಹಚ್ಚುವ ಕೆಲಸವನ್ನು ಮಾಡುತ್ತಿದ್ದರು ಮತ್ತು ಸಿಲ್ಕ್ ಸ್ಮಿತಾ ಅವರ ಮೊದಲ ಹೆಸರು ವಿಜಯಲಕ್ಷ್ಮಿ ವಾಡ್ಲಾ ಪಟ್ಲ ಚೆನ್ನೈನ ಪ್ರಖ್ಯಾತ ಎವಿಎಂ ಸ್ಟುಡಿಯೋದ ನಿರ್ದೇಶಕರಲ್ಲಿ ಒಬ್ಬರಾದ ವಿನೋದ್ ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾ ಅವರನ್ನು ಗಮನಿಸಿ ತಮ್ಮ ವಲಯದಲ್ಲಿ ಬರಮಾಡಿಕೊಂಡರು ಮತ್ತು ತಮ್ಮ ಪತ್ನಿಗೆ ಹೇಳಿ ಸಿಲ್ಕ್ ಸ್ಮಿತಾ ಅವರಿಗೆ ನಟಿಯರಿಗೆ ಇರಬೇಕಾದ ಇಂಗ್ಲಿಷ್ ಮತ್ತು ಹಾವಭಾವ.

ನಡೆ ಉಡುಗೆ-ತೊಡುಗೆಗಳ ಬಗ್ಗೆ ಕಲಿಸಿಕೊಡು ಎಂದು ತಿಳಿಸಿದರು ಒಳ್ಳೆ ವಿದ್ಯಾರ್ಥಿಯಾದ ಸಿಲ್ಕ್ ಸ್ಮಿತಾ ಅವರು ಇವೆಲ್ಲವನ್ನು ಕಲಿತು ಪರಿಪಕ್ವತೆಯನ್ನು ಹೊಂದಿದ್ದರು ಮತ್ತು ವಿನೋದ್ ಚಕ್ರವರ್ತಿಯವರು ವಿಜಯಲಕ್ಷ್ಮಿ ಎಂಬುವ ಹೆಸರನ್ನು ತೆಗೆದು ಹಾಕಿ ಸಿಲ್ಕ್ ಸ್ಮಿತಾ ಎಂದು ಹೆಸರಿಟ್ಟರು ನಂತರ ವಿನೋದ್ ಚಕ್ರವರ್ತಿಯವರ ಸಹಾಯದಿಂದ ಸಿಲ್ಕ್ ಸ್ಮಿತಾ ಅವರು ಬೆಳೆದುಬಂದ ರೀತಿ ಯಾವ ರೀತಿಯಾಗಿತ್ತು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ. ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿ ಅನೇಕ ಹೊಸ ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.
All rights reserved Cinema Company 2.0.