ಮನಮೋಹಕ ನಟಿ ಮೀನಾ ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ನಿಮಗೆ ಗೊತ್ತಾ ವಿಡಿಯೋ ನೋಡಿ!?

in News 172 views

ನಮಸ್ಕಾರ ಪ್ರಿಯ ವೀಕ್ಷಕರೇ ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರು ತಮ್ಮ ಸಹಜ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿ ಬಳಗವನ್ನು ಪಡೆದ ಈ ಮೋಹಕ ನಟಿ ಸೆಪ್ಟಂಬರ್ ೧೬,೧೯೭೬ ರಲ್ಲಿ ತಮಿಳುನಾಡಿನಲ್ಲಿ ಈ ಖ್ಯಾತ ನಟಿ ಜನಿಸಿದಳು ಮತ್ತು ತಮಿಳು ಚಿತ್ರದ ಬಾಲನ ಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದ ನಟಿ ಮೀನಾ ಅವರು ನಂತರ ಕನ್ನಡ ಮತ್ತು ತಮಿಳು ಮತ್ತು ತೆಲುಗು ಮತ್ತು ಮುಂತಾದ ರಾಜ್ಯಗಳ ಚಿತ್ರರಂಗದಲ್ಲಿ ಬಾಲನಟಿಯಾಗಿ ಅಭಿನಯಿಸಿ ಚಿತ್ರರಂಗದಲ್ಲಿ ಹೆಸರು ಮಾಡಲು ಪ್ರಾರಂಭಿಸಿದರು ನಂತರ ಮನಮೋಹಕ ನಟಿ ಮೀನಾ ಅವರು ದಕ್ಷಿಣ ಭಾರತದ ಎಲ್ಲಾ ರಾಜ್ಯದ ಸಿನಿಮಾಗಳಲ್ಲಿ ಸಹ ನಾಯಕಿ ನಟಿಯಾಗಿ ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ಮೀನ ಅವರು ೮ನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ತೊರೆದು.

ಅಭಿನಯದತ್ತ ಹೆಚ್ಚು ಆಸಕ್ತಿಯನ್ನು ತೋರಿದರು ನಂತರ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದಾಗ ತಮ್ಮ ೧೦ನೇ ತರಗತಿಯ ವಿದ್ಯಾ ಅಭ್ಯಾಸವನ್ನು ಪ್ರಾರಂಭಿಸುತ್ತಾರೆ ೧೦ನೇ ತರಗತಿಯ ಪರೀಕ್ಷೆಯನ್ನು ಪಾಸು ಮಾಡಿದ ಮೀನಾ ಅವರು ಮತ್ತೆ ಚಿತ್ರರಂಗಕ್ಕೆ ಅಭಿನಯಿಸಲು ಬರುತ್ತಾರೆ ನಮ್ಮ ಕರ್ನಾಟಕದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುಟ್ನಂಜ ಸಿನಿಮಾ ಮುಖಾಂತರ ಕರ್ನಾಟಕದ ಜನತೆಗೆ ಚಿರಪರಿಚಿತವಾದ ಈ ನಟಿ ಮೀನಾ ಅವರು ನಂತರ ರವಿಚಂದ್ರನ ಜೊತೆಗೂಡಿ ನಾಲ್ಕೈದು ಸಿನಿಮಾಗಳನ್ನು ಕನ್ನಡದಲ್ಲಿ ಮಾಡಿದರು ಮತ್ತು ನಮ್ಮ ಹೆಮ್ಮೆಯ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ಸಿಂಹಾದ್ರಿಯ ಸಿಂಹ ಕಿಚ್ಚ ಸುದೀಪ್ ಅವರ ಜೊತೆ ಸ್ವಾತಿಮುತ್ತು ಮೈ ಆಟೋಗ್ರಾಫ್ ಎಂಬ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಿದರು.

ನಂತರ 2009ರಲ್ಲಿ ಸಾಫ್ಟ್ವೇರ್ ಉದ್ಯೋಗಿ ವಿದ್ಯಾಸಾಗರ್ ಎಂಬವರನ್ನು ಮೀನಾ ಅವರು ಮದುವೆಯಾಗುತ್ತಾರೆ ನಂತರ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು ಮಗುವಾದ ತಕ್ಷಣ ಮೀನಾ ಅವರು ನಟನೆಗೆ ಸ್ವಲ್ಪ ದಿನ ಬ್ರೇಕ್ ಅನ್ನು ಕೊಟ್ಟರು ಇವಾಗ ಮೀನಾ ಅವರು ತಮ್ಮ ಮಗು ಮತ್ತು ತಮ್ಮ ಗಂಡನ ಜೊತೆಗೆ ನೆಮ್ಮದಿಯಿಂದ ಸುಖವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಇನ್ನು ಮೀನಾ ಅವರ ಮಗಳು ಬೇಬಿ ನೈನಿಕಾ ವಿಜಯ್ ನಟನೆಯ ತೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ನೋಡಿದ್ರಲ್ಲ ಪ್ರಿಯ ಮಿತ್ರರೇ ನಟಿ ಮೀನಾ ಅವರ ಬದುಕು ಈಗ ಹೇಗಿದೆ ಎಂದು ಮತ್ತು ನೀವು ಮೋಹಕ ನಟಿ ಮೀನ ಅವರ ಅಭಿಮಾನಿಯಾಗಿದ್ದರೆ ಅವರ ಯಾವ ಸಿನಿಮಾ ನಿಮಗೆ ಇಷ್ಟವೆಂದು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.