ನಮ್ಮ ಕರ್ನಾಟಕದ ಜಿಲ್ಲಾಧಿಕಾರಿ ತಮಿಳುನಾಡಿನಲ್ಲಿ ಮಾಡಿದ ಕೆಲಸ ನೋಡಿ ತಮಿಳಿಗರು ಶಭಾಷ್ ಎಂದಿದ್ದಾರೆ ಯಾಕೆ ಗೊತ್ತಾ ವಿಡಿಯೋ ನೋಡಿ!?

in News 821 views

ನಮಸ್ಕಾರ ಹೌದು ಇವತ್ತು ನಾವು ಹೇಳುತ್ತಿರುವ ವಿಷಯ ಒಂದು ಅದ್ಭುತ ಮತ್ತು ರೋಚಕವಾಗಿದೆ ಕಾರಣ ಇವತ್ತಿನ ಸಮಾಜದಲ್ಲಿ ನಮಗೆ ಪ್ರಾಮಾಣಿಕ ವ್ಯಕ್ತಿಗಳು ಸಿಗುವುದು ತುಂಬಾನೇ ಅಪರೂಪ ಅಂತಹದರಲ್ಲಿ ಒಂದು ಒಳ್ಳೆಯ ಹುದ್ದೆಯಲ್ಲಿದ್ದುಕೊಂಡು ಪ್ರಾಮಾಣಿಕವಾಗಿ ಇರುವುದಂತೂ ತುಂಬಾ ವಿರಳ ಮತ್ತು ಅಪರೂಪ ಇವತ್ತಿನ ಸಮಾಜದಲ್ಲಿ ಈಗಿರುವ ಗಣ್ಯ ವ್ಯಕ್ತಿಗಳು ಮತ್ತು ಒಳ್ಳೆ ಹುದ್ದೆಯಲ್ಲಿರುವ ಆಫೀಸರುಗಳು ತುಂಬಾ ಪ್ರಾಮಾಣಿಕರಾಗಿರುವುದು ಬಹಳ ಕಡಿಮೆ ಕಾರಣ ಲಕ್ಷ ರೂಪಾಯಿಗಳನ್ನು ಲಂಚ ಕೊಟ್ಟು ಕೆಲಸ ಗಿಟ್ಟಿಸಿಕೊಂಡ ಮೇಲೆ ಅವರು ಮಾಡುವ ಮೊದಲ ಕೆಲಸ ಭ್ರಷ್ಟಾಚಾರದ ಕೆಲಸ ಗಳಾಗಿರುತ್ತವೆ ಅದಕ್ಕೆ ನಾವು ಅವರನ್ನು ಪ್ರಶ್ನಿಸಿದರೆ ಅವರು ನಮಗೆ ಹೇಳುವುದು.

ಹೌದು ರೀ ನಾವು ಕೂಡ ಲಕ್ಷ ರೂಪಾಯಿ ಕೊಟ್ಟು ಈ ಹುದ್ದೆಗೆ ಬಂದಿದ್ದೇವೆ ತೆಗೆದುಕೊಳ್ಳದಿದ್ದರೆ ನಾವು ಲಂಚ ಕೊಟ್ಟ ಹಣವನ್ನು ಹೇಗೆ ಪಡೆಯುವುದು ಎಂದು ನಮ್ಮನ್ನು ಪ್ರಶ್ನಿಸುತ್ತಾರೆ ಆದರೂ ಪ್ರಿಯ ಮಿತ್ರರೇ ಇಂತಹವರ ಮಧ್ಯೆ ನಮಗೆ ಅಪರೂಪವೆಂಬಂತೆ ಕೆಲವು ಸಲ ನಮಗೆ ಇಂತಹ ಪ್ರಾಮಾಣಿಕ ವ್ಯಕ್ತಿಗಳು ನಮಗೆ ಸಿಗುತ್ತಾರೆ ಅಂಥವರ ಸಾಲಿನಲ್ಲಿ ನಮ್ಮ ಕರ್ನಾಟಕದಿಂದ ತಮಿಳುನಾಡಿಗೆ ಹೋಗಿ ಜಿಲ್ಲಾಧಿಕಾರಿಯಾದ ನಮ್ಮ ಕನ್ನಡದ ಹೆಮ್ಮೆಯ ಮಹಿಳೆ ಶಿಲ್ಪಾ ಪ್ರಭಾಕರ್ ಅವರು ತಮಿಳುನಾಡಿನ ತಿರುನಾಲ್ ವಿಲೈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಇತ್ತೀಚಿಗೆ ಶಿಲ್ಪ ಪ್ರಭಾಕರ್ ಅವರ ಗಮನಕ್ಕೆ ಈ ಜಿಲ್ಲೆಯಲ್ಲಿ ಸಾಕಷ್ಟು ಜನರಿಗೆ ನೀರಿನಿಂದ ಕಾಯಿಲೆ ಬರುತ್ತಿದೆ ಎಂದು ತಿಳಿದ ತಕ್ಷಣ ಶಿಲ್ಪ ಪ್ರಭಾಕರ್ ಅವರೇ ಆ ಜಿಲ್ಲೆಯಲ್ಲಿರುವ ವಾಟರ್ ಟ್ಯಾಂಕ್ ಗಳಿಗೆ ಭೇಟಿ ಕೊಡುತ್ತಾರೆ.

ಶಿಲ್ಪಾ ಪ್ರಭಾಕರ್ ಅವರು ವಾಟರ್ ಟ್ಯಾಂಕ್ ಬಳಿ ಹೋದ ತಕ್ಷಣ ಅಲ್ಲಿಯ ಸಿಬ್ಬಂದಿ ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಾನೆ ಆದರೂ ಶಿಲ್ಪಾ ಪ್ರಭಾಕರ್ ಅವರಿಗೆ ಏನೋ ಸಮಸ್ಯೆಯಿದೆ ಎಂದು ಅಲ್ಲಿ ಅವರ ಗಮನಕ್ಕೆ ಬರುತ್ತದೆ ಹಿಂದೆ ಮುಂದೆ ಯೋಚಿಸದೆ ನಮ್ಮ ಕರ್ನಾಟಕದ ದಿಟ್ಟ ಮಹಿಳೆ ಶಿಲ್ಪ ಪ್ರಭಾಕರ್ ಅವರು 140ಅಡಿ ಎತ್ತರದಲ್ಲಿರುವ ವಾಟರ್ ಟ್ಯಾಂಕ್ ಅನ್ನು ಹತ್ತಿ ಅಲ್ಲಿಯ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಳ್ಳುತ್ತಾರೆ ಜನಗಳು ಇದರಿಂದಾಗಿ ಸಾಯುತ್ತಿದ್ದಾರೆ ತಕ್ಷಣಕ್ಕೆ ಇದನ್ನು ಸ್ವಚ್ಛ ಮಾಡದೆ ಇಲ್ಲದಿದ್ದರೆ ನಿಮ್ಮನ್ನು ಕೆಲಸದಿಂದ ವಜಾ ಮಾಡುತ್ತಾನೆ ಎಂದು ಸಿಬ್ಬಂದಿಗೆ ಬೈದು ಬುದ್ಧಿ ಹೇಳಿ ಹೋಗುತ್ತಾರೆ ಇದನ್ನು ಕಂಡ ತಮಿಳುನಾಡಿನ ಜನತೆ ಶಿಲ್ಪಾ ಅವರಿಗೆ ಶಬಾಸ್ ಗಿರಿಯನ್ನು ಕೊಟ್ಟಿದ್ದಾರೆ. ಸಾಲದಕ್ಕೆ ಶಿಲ್ಪ ಅವರ ಸರಳತೆ ಮತ್ತು ಪ್ರಾಮಾಣಿಕತೆ ಹೇಗಿದೆ ಎಂದರೆ ಅವರು ಇಷ್ಟೆಲ್ಲ ಶ್ರೀಮಂತಿಕೆ ಇದ್ದರೂ ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ನೋಡಿದ್ರಲ್ಲ ಪ್ರಿಯ ಮಿತ್ರರೇ ಇಂತಹ ಪ್ರಾಮಾಣಿಕ ಜಿಲ್ಲಾಧಿಕಾರಿಗಳು ಇವತ್ತಿನ ದಿನಗಳಲ್ಲಿ ಸಿಗುವುದು ಬಹಳ ವಿರಳ ಅದರಲ್ಲೂ ಕೂಡ ನಮ್ಮ ಕರ್ನಾಟಕದ ಹೆಮ್ಮೆಯ ದಿಟ್ಟ ಮಹಿಳೆ ಶಿಲ್ಪ ಪ್ರಭಾಕರ್ ಅವರು ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಕರ್ನಾಟಕದ ಜನತೆಗೆ ಹೆಮ್ಮೆಯ ವಿಷಯ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.