ಸಾವಿಗೂ ಮುನ್ನ ಯಮನು ತಿಳಿಸುವ 4 ಮರಣ ಸೂಚನೆಗಳು ಯಾವುವು ಗೊತ್ತಾ ಪ್ರತಿಯೊಬ್ಬರು ಈ ಕಠೋರ ಸತ್ಯವನ್ನು ತಿಳಿದುಕೊಳ್ಳಬೇಕು!?

in News 29,849 views

ನಮಸ್ಕಾರ ಪ್ರಿಯ ವೀಕ್ಷಕರೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ಜೀವಿ ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಮರಣದ ನಂತರ ಮರುಜನ್ಮ ಪಡೆಯುವುದು ಕೂಡ ಯಾರು ಕೂಡ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ತಿಳಿಸಿದ್ದಾರೆ ಆದರೆ ಒಬ್ಬರಿಗೆ ಸಾವು ಬೇಗ ಬರುತ್ತದೆ ಇನ್ನೊಬ್ಬರಿಗೆ ಸಾವು ಲೇಟಾಗಿ ಬರುತ್ತದೆ ನಮ್ಮ ಹಿಂದೂ ಪುರಾಣಗಳ ಪ್ರಕಾರ ಮನುಷ್ಯನ ಆಯಸ್ಸು ಮುಗಿದ ಮೇಲೆ ಯಮಧರ್ಮರಾಯ ಮನುಷ್ಯನ ಆತ್ಮವನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳಿದ್ದಾರೆ ಪ್ರತಿ ಮನುಷ್ಯನಿಗೆ ಸಾವು ಬರುವ ಮುನ್ನ ನಾಲ್ಕು ಸೂಚನೆಗಳನ್ನು ಭಗವಂತ ಮನುಷ್ಯನಿಗೆ ನೀಡುತ್ತಾನೆ ಎಂದು ಹೇಳಿದ್ದಾರೆ ಅದು ಹೇಗೆ ಎಂದು ನಾವು ತಿಳಿದುಕೊಳ್ಳುವ ಮೊದಲು ಈ ಒಂದು ಕಥೆಯನ್ನು ನಾವು ಮೊದಲಿಗೆ ತಿಳಿದುಕೊಳ್ಳಬೇಕಾಗುತ್ತದೆ. ಹೌದು ಪ್ರಿಯ ಮಿತ್ರರೇ ಯಮುನಾ ನದಿ ತೀರದಲ್ಲಿ ಅಮೃತ ಎಂಬ ವ್ಯಕ್ತಿ ವಾಸವಿರುತ್ತಾನೆ ಒಂದು ಸಮಯದಲ್ಲಿ ಅಮೃತನಿಗೆ ಈ ಮರಣದ ಭಯ ಹುಟ್ಟುತ್ತದೆ ಹೌದು ಅಮೃತನಿಗೆ ಸಾವು ಹೇಗೆ ಬರಬಹುದು ಮತ್ತು ನಾನು ಹೇಗೆ ಸಾಯುತ್ತೇನೆ ಎಂಬುವ ಭಯ ಅಮೃತನಲ್ಲಿ ಕಾಡಲಾರಂಭಿಸುತ್ತದೆ ಇದನ್ನು ನೆನಪಿಸಿಕೊಂಡು ದಿನವಿಡಿ ಭಯ ಪಡುತ್ತಿರುತ್ತಾನೆ ಈ ಒಂದು ಕಾರಣದಿಂದಾಗಿ ಅಮೃತನು ಯಮಧರ್ಮನಿಗಾಗಿ ತಪಸ್ಸನ್ನು ಮಾಡುತ್ತಾನೆ ತಪಸ್ಸಿಗೆ ಮೆಚ್ಚಿದ ಯಮಧರ್ಮ ಅಮೃತನಿಗೆ ಯಾವ ವರ ಬೇಕು ಕೇಳು ಎಂದು ಹೇಳುತ್ತಾನೆ ಅದಕ್ಕೆ ಅಮೃತನು ಯಮಧರ್ಮರಾಯನ ಹತ್ತಿರ ನಾನು ಹೇಗೆ ಸಾಯುತ್ತೇನೆ ಮತ್ತು ಸಾವಿಗೆ ಮುನ್ನ ನನಗೆ ಯಾವ ಸೂಚನೆಗಳು ಬರುತ್ತವೆ ಎಂದು ಹೇಳಬೇಕು ಎಂದು ಯಮನಲ್ಲಿ ಅಮೃತನು ಕೇಳಿಕೊಳ್ಳುತ್ತಾನೇ ಒಂದು ವೇಳೆ.

ಸಾವಿಗೆ ಮುನ್ನ ಸೂಚನೆಗಳು ಬಂದರೆ ನಮ್ಮ ಜವಾಬ್ದಾರಿಗಳನ್ನು ಎಲ್ಲರಿಗೂ ಅಂಚೆ ನಾನು ಸಾಯಬಹುದು ಎಂದು ಕೇಳಿಕೊಳ್ಳುತ್ತಾನೆ ಇದನ್ನು ಕೇಳಿದ ಯಮಧರ್ಮರಾಯ ಮರಣ ಯಾವಾಗ ಬರುತ್ತದೆ ಎಂದು ಹೇಳೋಕೆ ಆಗೋದಿಲ್ಲ ಆದರೆ ಅದು ಬರುವ ಮುಂಚೆ ಕೆಲವು ಸೂಚನೆಗಳನ್ನು ನಾನು ನಿನಗೆ ಹೇಳುತ್ತೇನೆ ಅದನ್ನು ತಿಳಿದುಕೊಂಡು ಅರ್ಥಮಾಡಿಕೊಂಡು ನಿನ್ನ ಸಾವು ಸಮೀಪವಿದೆ ಅಥವಾ ಹತ್ತಿರವಿದೆ ಎಂದು ಹೇಳಿ ಮಾಯವಾಗುತ್ತಾನೆ ಕಾಲಕಳೆದಂತೆ ಅಮೃತ ನಿಗೆ ಮದುವೆಯಾಗಿ ಮಕ್ಕಳು ಕೂಡ ಆಗುತ್ತದೆ ಇದರಿಂದ ಅಮೃತನು ನನಗೆ ಯಾವ ಸೂಚನೆಗಳು ಬಾರದೇ ಇರುವ ಕಾರಣ ನನಗೆ ಇನ್ನೂ ಆಯಸ್ಸು ಇದೆ ಎಂದು ಅಮೃತನು ಅಂದುಕೊಂಡ ದಿನಗಳು ಕಳೆದಂತೆ ಅಮೃತನ ಕೂದಲು ಪೂರ್ತಿ ಬಿಳಿಯಾಗುತ್ತದೆ ಚರ್ಮವು ತುಂಬಾ.

ಮೃದುವಾಗುತ್ತದೆ ಹಲ್ಲುಗಳು ಬಿದ್ದುಹೋಗುತ್ತದೆ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತದೆ ಮತ್ತು ಪಶ್ಚಾತ್ತಾಪದಿಂದ ಮಂಚವನ್ನು ಏರುತ್ತಾನೆ ಆಗಾಗ ಯಮಧರ್ಮರಾಯನು ಬಂದು ಅಮೃತ ನಿನ್ನ ಪ್ರಾಣವನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾನೆ ಯಮನ ಮಾತಿಗೆ ಅಚ್ಚರಿಯಾದ ಅಮೃತನು ನನಗೆ ಎಂತಹ ಸೂಚನೆಗಳು ಬಂದಿಲ್ಲ ಆದರೂ ನೀನು ನನ್ನ ಪ್ರಾಣವನ್ನು ತೆಗೆದುಕೊಂಡು ಹೋಗುತ್ತೀನಿ ಅಂತ ಹೇಳುತ್ತಿದ್ದೆಯಲ್ಲ ಅಂದರೆ ನೀನು ಕೊಟ್ಟ ವರ ಬರಿ ಮಾತೇನಾ ಎಂದು ಯಮನನ್ನು ಪ್ರಶ್ನಿಸುತ್ತಾನೆ ಅಮೃತನು ಆಗ ಯಮ ಧರ್ಮರಾಜ ನಾನು ನಿನಗೆ 4 ಮರಣ ಸೂಚನೆಗಳನ್ನು ತಿಳಿಸಿದ್ದೇನೆ ಆದರೆ ನೀನು ಅವುಗಳನ್ನು ಅರ್ಥಮಾಡಿಕೊಂಡಿಲ್ಲ ಆಗ ಅಮೃತನು ಯಮಧರ್ಮರಾಜನ ಹತ್ತಿರ ಯಾವುದು ಆ ನಾಲ್ಕು ಸೂಚನೆಗಳು ಎಂದು ಕೇಳುತ್ತಾನೆ ಆಗ ಯಮ ನಾಲ್ಕು ಅನಾರೋಗ್ಯ ಸೂಚನೆಗಳನ್ನು ನಿನಗೆ ತಿಳಿಸಿದ್ದೇನೆ ಬಿಳಿ ಕೂದಲು ಬರುವುದನ್ನು ಮತ್ತು ಹಲ್ಲು ಉದುರುವುದನ್ನು ಕಣ್ಣು ಕಾಣಿಸದೇ ಹೋಗುವುದನ್ನು ಪಶ್ಚಾತಾಪ ಬಂದು ನೀನು ಮಂಚ ಏರುವುದನ್ನು ತಿಳಿಸಿದ್ದೇನೆ. ಎಂದ ಯಮ ಹೇಳುತ್ತಾನೆ ಆಗ ಅಮೃತನು ನಿಜ ಎಂದು ಒಪ್ಪಿಕೊಂಡ ಆಗ ಯಮಧರ್ಮರಾಯ ಅಮೃತನ ಪ್ರಾಣವನ್ನು ತೆಗೆದುಕೊಂಡು ಹೋದ ಎಂದು ಆ ಕಥೆಯಲ್ಲಿ ಉಲ್ಲೇಖಿಸಿದ್ದಾರೆ ಈ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದ ವಿಚಾರ ಇಷ್ಟೇ ನಮಗೆ ಬರುವ ಅನಾರೋಗ್ಯಗಳು ನಮ್ಮ ಮರಣದ ಮುನ್ಸೂಚನೆಗಳಾಗಿವೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.