ಹೀಗೆ ಮಾಡಿದರೆ ಒಂದೇ ಒಂದು ಇರುವೆ ಕೊಡ ನಿಮ್ಮ ಮನೇಲಿ ಕಾಣಿಸಲ್ಲ ಇರುವೆ ಓಡಿಸುವ ಮನೆ ಮದ್ದು ವಿಡಿಯೋ ನೋಡಿ!?

in News 3,533 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಇರುವೆ ನೋಡೋದಕ್ಕೆ ಇಷ್ಟು ಚಿಕ್ಕದಾಗಿದ್ದರೂ ಕೂಡ ಇದರ ಕಾಟ ಮಾತ್ರ ಭಯಂಕರವಾಗಿರುತ್ತದೆ ಮತ್ತು ನಮಗೆ ಭಯಂಕರ ಕಿರಿಕಿರಿಯನ್ನು ತರಿಸುತ್ತದೆ ಹೌದು ಪ್ರಿಯ ಮಿತ್ರರೇ ಅಡುಗೆ ಮನೆಯ ಕಟ್ಟೆಯ ಮೇಲೆ ಯಾವುದಾದರೂ ಒಂದು ವಸ್ತು ಇಟ್ಟರೆ ಈ ಇರುವೆಗಳು ಎಲ್ಲಿಂದ ಬರುತ್ತವೆ ಏನೋ ಒಂದು ಗೊತ್ತಿಲ್ಲ ಆದರೆ ಈ ಇರುವೆಗಳು ಬಂದರೆ ತಮ್ಮ ಪರಿವಾರದ ಸಮೇತ ಅಂದರೆ ರಾಶಿಗಟ್ಟಲೆ ಬರುತ್ತವೆ ಅದರಲ್ಲೂ ನಾವು ಹಾಲಿನ ಪಾತ್ರೆಯನ್ನು ಅಡುಗೆಮನೆಯಲ್ಲಿ ತೊಳೆಯಲು ಎಂದು ಇಟ್ಟರೆ ಈ ಇರುವೆಗಳು ಅದೆಷ್ಟು ಬರುತ್ತವೆ ಎಂದು ನಿಮಗೆ ಇದರ ಅನುಭವವಾಗಿರುತ್ತದೆ ಮತ್ತು.

ಇದರಿಂದ ನಿಮಗೆ ತುಂಬಾ ಕಿರಿಕಿರಿ ಕೂಡ ಆಗಿರುತ್ತದೆ ಅದರಲ್ಲೂ ಕೂಡ ಈ ಇರುವೆಗಳಲ್ಲಿ ಹಲವು ಬಗೆಯ ಇರುವೆಗಳು ಇದ್ದಾವೆ ಪ್ರಿಯ ಮಿತ್ರರೇ ನಿಮ್ಮ ಮನೆಯಲ್ಲೂ ಕೂಡ ಅತಿಯಾದ ಇರುವೆಗಳು ಇದ್ದಾವಾ ಮತ್ತು ಈ ಇರುವೆಗಳಿಂದ ನಿಮಗೆ ಸಾಕಷ್ಟು ಕಿರಿಕಿರಿ ಆಗುತ್ತಿದೆಯಾ ಹಾಗಾದರೆ ನಾವು ಹೇಳುವ ಇವತ್ತಿನ ಈ ಸಲಹೆಯನ್ನು ನೀವು ಬಳಸಿದ್ದೇ ಆದಲ್ಲಿ ಖಂಡಿತವಾಗಲೂ ನಿಮ್ಮ ಮನೆಯಿಂದ ಇರುವೆಗಳನ್ನು ಓಡಿಸಬಹುದು ಔಷಧಿ ಯಾವುದು ಎಂದು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ಕಲಿಯಿರಿ. ಹಾಗಾದರೆ ನಾವು ನಮ್ಮ ಮನೆಯಲ್ಲಿರುವ ಇರುವೆಗಳನ್ನು ಓಡಿಸಲು ಏನು ಮಾಡಬೇಕು ಎಂದರೆ ಈ ರೀತಿಯ ಔಷಧಿಯನ್ನು ಸಿದ್ಧಪಡಿಸಿಕೊಂಡು ಇರುವೆಗಳು ಇರುವ ಜಾಗದಲ್ಲಿ ಸಿಂಪಡಿಸಿದರೆ ಸಾಕು ಈ ಇರುವೆಗಳು ನಿಮ್ಮ ಮನೆಯಿಂದ ತಕ್ಷಣಕ್ಕೆ ಜಾಗ ಖಾಲಿ ಮಾಡುತ್ತವೆ ಪ್ರಿಯ ಮಿತ್ರರೇ ತಡಮಾಡದೆ ಆ ಔಷಧಿಗಳು ಯಾವುವು ಎಂದು ನಾವು ಈಗ ನಿಮಗೆ ತಿಳಿಸುತ್ತೇವೆ ಮೊದಲಿಗೆ ನೀವು ಒಂದು ಕುಟ್ಟಾಣಿಯಲ್ಲಿ ಎರಡು ಚಮಚದಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ ನಿಂಬೆ ಹಣ್ಣಿನ ಸಿಪ್ಪೆಯನ್ನು ತುರಿದು ಇದರಲ್ಲಿ ಹಾಕಿ ನಂತರ ಇದಕ್ಕೆ 10 ಲವಂಗಗಳನ್ನು ಹಾಕಿಕೊಳ್ಳಿ ನಂತರ ಈ 3ಪದಾರ್ಥಗಳನ್ನು ಕುಟ್ಟಾಣಿಯಲ್ಲಿ ಚೆನ್ನಾಗಿ ಪುಡಿಮಾಡಿಕೊಳ್ಳಿ ನಂತರ.

ಒಂದು ಟಬ್ ಅಲ್ಲಿ ಎರಡು ಲೀಟರ್ ನೀರನ್ನು ಹಾಕಿಕೊಳ್ಳಿ ಈ ನೀರಿನ ಒಳಗಡೆ ಈಗ ನಾವು ಸಿದ್ಧಪಡಿಸಿದ ಪೌಡರನ್ನು ಹಾಕಿಕೊಳ್ಳಿ ನಂತರ ಈ ನೀರಿನಲ್ಲಿ ಈ ಪೌಡರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಈ ನೀರಿನಿಂದ ನಿಮ್ಮ ಮನೆಯಲ್ಲಿ ಎಲ್ಲಿ ಜಾಸ್ತಿ ಇರುತ್ತವೆ ಆ ಜಾಗವನ್ನು ಚೆನ್ನಾಗಿ ವರಸಿ ಆಗ ನೋಡಿ ನಿಮ್ಮ ಮನೆಯಿಂದ ಈ ಇರುವೆಗಳು ಹೇಗೆ ಜಾಗ ಖಾಲಿ ಮಾಡುತ್ತವೆ ಎಂದು ಕಾರಣ ಈ ಇರುವೆಗಳಿಗೆ ನಾವು ಬಳಸಿರುವ ಈ ಪದಾರ್ಥದ ವಾಸನೆ ಕಂಡರೆ ಆಗುವುದಿಲ್ಲ ಹಾಗಾಗಿ ಅವುಗಳು ತಕ್ಷಣಕ್ಕೆ ನಮ್ಮ ಮನೆಯಿಂದ ಹೊರಟು ಹೋಗುತ್ತವೆ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಅನುಸರಿಸಿ ನಿಮ್ಮ ಮನೆಯಿಂದ ಈ ಇರುವೆಗಳನ್ನು ಓಡಿಸಿ. ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಯಾವ ರೀತಿಯಾಗಿ ನೀವು ಮಾಡಬೇಕು ಎಂದು ದೃಶ್ಯಗಳ ಮುಖಾಂತರ ನಾವು ತೋರಿಸಿದ್ದೇವೆ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.