1 ಕಪ್ ಅವಲಕ್ಕಿ ಮತ್ತು 1 ಕಪ್ ಅಕ್ಕಿ ಹಿಟ್ಟಿನಿಂದ ದಿಡೀರ್ ಚಕ್ಲಿ ಮಾಡುವ ವಿಧಾನ ವಿಡಿಯೋ ನೋಡಿ!

in News 3,616 views

ನಮಸ್ಕಾರ ಪ್ರಿಯ ವೀಕ್ಷಕರೆ ನೀವು ಕೂಡ ನಿಮ್ಮ ಮನೆಯಲ್ಲಿ ಚಕ್ಕಲಿಯನ್ನು ಮಾಡಲು ಇಷ್ಟಪಡುತ್ತೀರಾ ಹೇಗೆ ಚಕ್ಕಲಿ ಮಾಡುವುದು ಎಂದು ಯೋಚನೆ ಮಾಡುತ್ತಿದ್ದೀರಾ ಹಾಗಾದರೆ ಇವತ್ತು ನಾವು ನಿಮ್ಮ ಮನೆಯಲ್ಲಿ ಚಕ್ಕಲಿಯನ್ನು ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ತಿಳಿಸಿಕೊಡುವ ಪ್ರಯತ್ನ ಮಾಡುತ್ತವೆ ಮೊದಲಿಗೆ ನೀವು ಒಂದು ಮಿಕ್ಸಿ ಜಾರಿನಲ್ಲಿ ಒಂದು ಕಪ್ಪಿನಷ್ಟು ಅವಲಕ್ಕಿಯನ್ನು ಹಾಕಿಕೊಳ್ಳಿ ನಂತರ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ಈ ಸಿದ್ಧವಾದ ಪೌಡರನ್ನು ಇನ್ನೊಂದು ಕಪ್ಪಿನಲ್ಲಿ ಹಾಕಿ ಹಿಡಿ ನಂತರ ಇದೆ ಮಿಕ್ಸಿ ಜಾರಿನಲ್ಲಿ ಮುಕ್ಕಾಲು ಕಪ್ಪಿನಷ್ಟು ಹುರುಗಡ್ಲೆಯನ್ನು ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ. ನಂತರ ಗ್ಯಾಸಿನ ಮೇಲೆ ಒಂದು ಪಾತ್ರೆಯನ್ನು ಇಟ್ಟು ನಾವು ಯಾವ ಕಪ್ಪಿನಿಂದ ಅವಲಕ್ಕಿಯನ್ನು ತೆಗೆದುಕೊಂಡಿದ್ದವೋ ಆ ಕಪ್ಪಿನಿಂದ ಎರಡು ಕಪ್ಪಿನಷ್ಟು ನೀರನ್ನು ಈ ಪಾತ್ರೆಯಲ್ಲಿ ಹಾಕಿ ಈಗ ಈ ನೀರನ್ನು ಬಿಸಿ ಮಾಡಿಕೊಳ್ಳಿ ನೀರು ಬಿಸಿಯಾದ ನಂತರ ಈ ನೀರಿನಲ್ಲಿ ಒಂದು ಚಮಚದಷ್ಟು ಅಜವಾನದ ಪೌಡರನ್ನು ಕೈಯಿಂದ ತಿಕ್ಕಿ ಹಾಕಿ ನಂತರ ಈ ನೀರಿಗೆ ಒಂದು ಚಮಚದಷ್ಟು ಒಣ ಕಾರವನ್ನು ಹಾಕಿ ನಂತರ ಇದಕ್ಕೆ ನಿಮ್ಮ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ ನಾವು ಮುಂಚೆ ರೆಡಿ.

ಮಾಡಿಟ್ಟುಕೊಂಡಿರುವ ಅವಲಕ್ಕಿ ಪೌಡರನ್ನು ನೀರಿನಲ್ಲಿ ಹಾಕಿ ನಂತರ ಇದಕ್ಕೆ ಒಂದು ಕಪ್ಪಿನಷ್ಟು ಅಕ್ಕಿ ಹಿಟ್ಟನ್ನು ಹಾಕಿ ನಂತರ ಇದಕ್ಕೆ ಪುಟಾಣಿ ಪೌಡರ್ ಅನ್ನು ಹಾಕಿ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಮಿಕ್ಸ್ ಮಾಡಿಕೊಂಡ ನಂತರ ಸ್ವಲ್ಪ ಸಮಯಗಳ ಕಾಲ ತಣ್ಣಗಾದ ಮೇಲೆ ಇದನ್ನು ನಾವು ಇನ್ನೊಂದು ಪಾತ್ರೆಯಲ್ಲಿ ಹಾಕೋಣ ನಂತರ ಇದಕ್ಕೆ ಎರಡು ಚಮಚದಷ್ಟು ಅಡುಗೆ ಎಣ್ಣೆಯನ್ನು ಹಾಕಿ ನಂತರ ಇದನ್ನು ಚಪಾತಿ ಹಿಟ್ಟಿನ ಹಾಗೆ ಚೆನ್ನಾಗಿ ಕಲಸಿಕೊಳ್ಳಿ ನಂತರ ಇದನ್ನು ಚಕ್ಲಿ ಯಾಗಿ ಯಾವ ರೀತಿಯಾಗಿ ಮಾಡಬೇಕು ಎಂದು ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ವೀಕ್ಷಿಸಿದರೆ ನಿಮಗೆ ಉತ್ತಮ ಎಂದು.

ನಾವು ಭಾವಿಸಿದ್ದೇವೆ ಪ್ರಿಯ ಮಿತ್ರರೇ ಈ ವಿಧಾನವನ್ನು ನಾವು ಲೇಖನದಲ್ಲಿ ಹೇಳಿದರೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ ಎಂದು ನಾವು ಭಾವಿಸಿದ್ದೇವೆ ಹಾಗಾಗಿ ಪೂರ್ಣ ಪ್ರಮಾಣದ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಅನುಸರಿಸಿ ನಿಮ್ಮ ಮನೆಯಲ್ಲಿ ಚಕ್ಲಿಯನ್ನು ತಯಾರಿಸಿ ನಿಮ್ಮ ಮನೆಯ ಸದಸ್ಯರಿಗೆ ತಿನ್ನಲು ಕೊಡಿ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಧನ್ಯವಾದಗಳು.