ಸೊಳ್ಳೆಗಳನ್ನು ಓಡಿಸಲು ರಾಮಬಾಣ ಉಪಾಯ||get rid of mosquitoes/ಇಲ್ಲಿವೆ ಸರಳ ಮನೆಮದ್ದುಗಳು ವಿಡಿಯೋ ನೋಡಿ!😱🤔👌👇

in News 29 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಕ್ರಿಮಿಕೀಟಗಳ ಕಾಟ ಇದ್ದೇ ಇರುತ್ತದೆ ಅದರಲ್ಲೂ ಸೊಳ್ಳೆಗಳ ಕಾಟ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇದ್ದೇ ಇರುತ್ತದೆ ಎಷ್ಟೋ ಜನರು ಈ ಸೊಳ್ಳೆಗಳಿಂದ ಪ್ರಾಣವನ್ನು ಕೊಡ ಕಳೆದುಕೊಂಡಿದ್ದಾರೆ ಅಂದರೆ ಈ ಸೊಳ್ಳೆಗಳಿಂದ ಡೆಂಗ್ಯೂ ಮತ್ತು ಮಲೇರಿಯಾ ಚಿಕನ್ ಗುನ್ಯಾ ಈ ರೀತಿಯಂತಹ ಕಾಯಿಲೆಗಳು ಬಂದು ಸಾವಿಗೀಡಾಗಿದ್ದಾರೆ ಈ ಸೊಳ್ಳೆಗಳನ್ನು ಓಡಿಸಲು ಮತ್ತು ಸಾಯಿಸಲು ಎಷ್ಟೋ ಜನರು ಬ್ಯಾಟ್ಗಳನ್ನು ಉಪಯೋಗ ಮಾಡುತ್ತಾರೆ ಕ್ವಾಯಿಲ್ ಗಳನ್ನು ಕೊಡ ಉಪಯೋಗ ಮಾಡುತ್ತಾರೆ ಹಾಗೂ ವಿಸಿಲ್ ಗಳನ್ನು ಉಪಯೋಗ ಮಾಡುತ್ತಾರೆ ಆದರೆ ಅವುಗಳಿಂದ ನಮಗೆ ಹಾನಿಕಾರ ಇದೆ ಅಂತ ಗೊತ್ತಿದ್ದರೂ ಕೂಡ ಇವುಗಳನ್ನು ಉಪಯೋಗ ಮಾಡುತ್ತೇವೆ ಅದರಲ್ಲೂ ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಇಂತಹ mosquito coils ಅಥವಾ ಬ್ಯಾಟ್ ಗಳನ್ನು.

ಉಪಯೋಗ ಮಾಡುವುದು ತುಂಬಾನೇ ಹಾನಿಕರವೆಂದು ಹೇಳಬಹುದು ಹಾಗಾಗಿ ನಾವು ಮನೆಯಲ್ಲೇ ಇರುವಂತಹ ನೈಸರ್ಗಿಕ ಪದಾರ್ಥಗಳನ್ನು ಅಥವಾ ವಸ್ತುಗಳನ್ನು ಬಳಸಿಕೊಂಡು ಈ ಸೊಳ್ಳೆಗಳನ್ನು ನಾಶಮಾಡಲು ನಾವು ಪ್ರಯತ್ನವನ್ನು ಮಾಡಬೇಕಾಗುತ್ತದೆ ಹಾಗಿದ್ದರೆ ಮನೆಯಲ್ಲೇ ಇರುವಂತ ವಸ್ತುಗಳನ್ನು ಬಳಸಿಕೊಂಡು ನಾವು ಹೇಗೆ ಈ ಸೊಳ್ಳೆಗಳನ್ನು ಹೊರಗೆ ಓಡಿಸಬಹುದು ಅಂತ ಇಂದಿನ ಈ ಒಂದು ವಿಡಿಯೋದಲ್ಲಿ ಮತ್ತು ಇಂದಿನ ಈ ಲೇಖನದಲ್ಲಿ ಕೆಲವು ಮನೆಮದ್ದುಗಳನ್ನು ನಿಮಗೆ ತಿಳಿಸಿಕೊಡುತ್ತೇವೆ ಹಾಗಾಗಿ ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಈ ಸೊಳ್ಳೆಗಳನ್ನು ಹೊರಗೆ ಓಡಿಸಲು ಈ ಬೇವಿನ ಎಲೆಗಳು ಉಪಯುಕ್ತವಾಗಿದೆ ಈ ಸೊಳ್ಳೆಗಳನ್ನು ಹೊರಗೆ ಓಡಿಸಲು ಮಾಡಬೇಕಾಗಿರುವುದು ಇಷ್ಟೇ ನೀವು ಒಣಗಿರುವಂತ ಬೇವಿನ ಎಲೆಗಳನ್ನು ಆರಿಸಿ ತರಬೇಕು ಅಥವಾ ಬೇವಿನ ಎಲೆಗಳನ್ನು ತಂದು ಅದನ್ನು ಸಂಪೂರ್ಣವಾಗಿ.

ಒಣಗಿಸಬೇಕು ಸಂಪೂರ್ಣವಾಗಿ ಒಣಗಿರುವಂತ ಬೇವಿನ ಎಲೆಗಳನ್ನು ಒಂದು ಬೇಡವಾದ ತಾಟಿನಲ್ಲಿ ಅಥವಾ ಯಾವುದಾದರೂ ಒಂದು ಸ್ಟೀಲಿನ ಮಗ್ಗಿನಲ್ಲಿ ಹಾಕಿ ಇದಕ್ಕೆ ಕರ್ಪೂರವನ್ನು ಹಾಕಿ ಬೆಂಕಿಯನ್ನು ಹಚ್ಚಬೇಕು ಇದರಿಂದ ಬಿಡುವಂತಹ ಹೊಗೆಯೂ ಮನೆಯಲ್ಲಿ ಎಷ್ಟು ಸೊಳ್ಳೆಗಳು ಇದ್ದರೂ ಕೂಡ ಅವು ಮನೆಯಿಂದ ಹೊರಗೆ ಹೋಗುತ್ತವೆ ಒಂದು ಸಲ ನೀವು ಬೇಕಾದರೆ ಟ್ರೈ ಮಾಡಿ ನೋಡಿ ಈ ಸೊಳ್ಳೆಗಳನ್ನ ಹೋಗಲಾಡಿಸಲು ಇದು ಅತ್ಯುತ್ತಮವಾದ ವಿಧಾನವಾಗಿದೆ ಇನ್ನು ಇನ್ನೊಂದು ವಿಧಾನವನ್ನು ನೋಡುವುದಾದರೆ ಈ ಮಾರ್ಕೆಟ್ ನಲ್ಲಿ ಬೇವಿನೆಣ್ಣೆ ಸಿಗುತ್ತದೆ ಈ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಬಂದು ಸಮ ಪ್ರಮಾಣದಲ್ಲಿ ಕೊಬ್ಬರಿಎಣ್ಣೆಯನ್ನು ತೆಗೆದುಕೊಳ್ಳಬೇಕು ನಂತರ ಇವೆರಡನ್ನು ಮಿಶ್ರಣ ಮಾಡಿ ನಿಮ್ಮ ದೇಹಕ್ಕೆ ಅಂದರೆ ನಿಮ್ಮ ಕೈಗಳಿಗಾಗಿರಬಹುದು ಅಥವಾ ಕಾಲುಗಳಿಗೆ ಹಚ್ಚಿಕೊಳ್ಳಬೇಕು ಈ ಮಿಶ್ರಣವು.

ಸರಿಸುಮಾರು ನಿಮ್ಮ ದೇಹದ ಮೇಲೆ 5 ರಿಂದ 8 ಗಂಟೆಗಳ ಕಾಲ ಇರುತ್ತದೆ ಈ ಬೇವಿನ ಎಣ್ಣೆಯ ವಾಸನೆಯಿಂದ ಸೊಳ್ಳೆಗಳು ನಿಮ್ಮ ಹತ್ತಿರ ಬರುವುದಿಲ್ಲ ಮತ್ತು ಈ ಬೇವಿನ ಎಣ್ಣೆಯನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಮತ್ತು ಕಿಟಕಿಗಳಿಗೆ ಕೂಡ ಸಿಂಪಡಿಸುವುದರಿಂದ ನಿಮ್ಮ ಮನೆಯೊಳಗೆ ಸೊಳ್ಳೆಗಳು ಬರುವುದನ್ನು ತಡೆಗಟ್ಟಬಹುದು ಇನ್ನು ಸಾಸಿವೆ ಎಣ್ಣೆ ಹಾಗೂ ಅಜ್ವಾನದ ಪುಡಿಯನ್ನು ಬಳಸಿಕೊಂಡು ಸೊಳ್ಳೆಯನ್ನು ನಿಯಂತ್ರಣದಲ್ಲಿಡಬಹುದು ಹೌದು ಈ ಸಾಸಿವೆ ಎಣ್ಣೆ ಹಾಗೂ ಅಜವಾನ ಪುಡಿಯ ವಾಸನೆ ಸೊಳ್ಳೆಗಳಿಗೆ ಆಗಿಬರುವುದಿಲ್ಲ ಇದಕ್ಕಾಗಿ ನೀವು ಸಾಸಿವೆ ಎಣ್ಣೆಯಲ್ಲಿ ಅಜ್ವಾನದ ಪುಡಿಯನ್ನು ಮಿಶ್ರಣ ಮಾಡಿ ನಿಮ್ಮ ನಿಮ್ಮ ರೂಮಿನಲ್ಲಿಡಬೇಕು ಹೀಗೆ ಮಾಡುವುದರಿಂದ ನಿಮ್ಮ ರೂಮಿನಲ್ಲಿ ಮತ್ತು ನಿಮ್ಮ ಮನೆಯಲ್ಲಿ ಸೊಳ್ಳೆಗಳು ಕಾಣಿಸಿಕೊಳ್ಳುವುದಿಲ್ಲ ಮತ್ತು ನಿಂತ ನೀರಿನಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಇರುತ್ತದೆ.

ಮತ್ತು ನಿಂತಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆಗಳನ್ನು ಸಹ ಇಡುತ್ತದೆ ಹಾಗಾಗಿ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಎಲ್ಲೂ ಕೂಡ ನೀರು ನಿಲ್ಲದಂತೆ ನೋಡಿಕೊಳ್ಳಿ ನಮ್ಮ ಇವತ್ತಿನ ಈ ಲೇಖನದಲ್ಲಿ ತಿಳಿಸಿದ ಈ ಪವರ್ಫುಲ್ ಮನೆಮದ್ದುಗಳನ್ನು ಬಳಸುವುದರಿಂದ ಈ ಸೊಳ್ಳೆಗಳ ಕಾಟದಿಂದ ನೀವು ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬಹುದು ನಮ್ಮ ಈ ಒಂದು ಲೇಖನದಲ್ಲಿ ತಿಳಿಸಿದ ಈ ಮನೆಮದ್ದುಗಳನ್ನು ಅನುಸರಿಸುವುದು ನಿಮಗೆ ಕಷ್ಟವೆನಿಸಿದರೆ ಇದಕ್ಕೆ ಪರಿಹಾರವಾಗಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇನ್ನೊಂದು ರೀತಿಯ ನೈಸರ್ಗಿಕ ಮನೆಮದ್ದನ್ನು ತಿಳಿಸಿದ್ದೇವೆ ನಿಮಗೆ ಯಾವುದು ಅನುಕೂಲವಾಗುತ್ತದೆ ಅದನ್ನು ಬಳಸಿ ಈ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಿ ಮತ್ತು ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಉಪಯುಕ್ತ ಮಾಹಿತಿಗಳನ್ನು ಪ್ರತಿನಿತ್ಯ ಪಡೆದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ಮತ್ತು ಪ್ರತಿನಿತ್ಯ ನಾವು ಹಾಕುವ ಹೊಸಹೊಸ ಉಪಯುಕ್ತ ಮಾಹಿತಿಗಳ ಬಗ್ಗೆ ತಿಳಿದುಕೊಂಡು ನಮ್ಮ ಮಾಹಿತಿಗಳ ಸದುಪಯೋಗವನ್ನು ಪಡೆದುಕೊಳ್ಳಿ ಧನ್ಯವಾದಗಳು.