ನೀವು ಮಲಗುವ ಭಂಗಿ ಯಾವುದು|ಮಲಗುವ ಉತ್ತಮ ಭಂಗಿ ಯಾವುದು|health tips Kannada|ಉಪಯುಕ್ತ ಮಾಹಿತಿ ವಿಡಿಯೋ ನೋಡಿ!😱🤔👇

in News 227 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಒಬ್ಬ ಆರೋಗ್ಯವಂತ ತನ್ನ ಜೀವಿತಾವಧಿಯಲ್ಲಿ ಸರಿ ಸುಮಾರು ಮೂರನೆಯ ಒಂದು ಭಾಗದಷ್ಟು ನಿದ್ದೆ ಮಾಡುತ್ತಾನೆ ಅಚ್ಚರಿ ಪಡಬೇಡಿ ಇದು ನಿಜ ಯಾಕೆಂದರೆ ದಿನಕ್ಕೆ 8 ಗಂಟೆಗಳ ಕಾಲ ಮಲಗಿದರೆ ಇಷ್ಟ ಆಗುತ್ತದೆ ಹಾಗೆಯೇ ಉತ್ತಮ ಆರೋಗ್ಯ ಹೊಂದಲು ಕೂಡ ನಿದ್ದೆ ಅತ್ಯವಶ್ಯಕ ಒಂದು ದಿನಕ್ಕೆ ಕನಿಷ್ಠ ಆರರಿಂದ ಎಂಟು ಗಂಟೆಗಳ ಕಾಲ ಗಾಢ ನಿದ್ದೆ ಮಾಡಬೇಕು ಉತ್ತಮ ನಿದ್ದೆ ಇದ್ದರೆ ಮಾತ್ರ ಸದೃಢ ಶರೀರ ಉಲ್ಲಾಸಿತ ಮನಸ್ಸು ಮತ್ತು ಅತ್ಯುತ್ತಮ ಚಟುವಟಿಕೆಯಿಂದ ಇರಲು ಸಾಧ್ಯ ಹೀಗಾಗಿ ಆಧುನಿಕ ಜೀವನ ಶೈಲಿಯಲ್ಲಿ ನಿದ್ದೆಯ ಬಗ್ಗೆ ತುಸು ಜಾಸ್ತಿಯೇ ಕಾಳಜಿ ವಹಿಸಬೇಕಾಗುತ್ತದೆ ಇನ್ನು ಉತ್ತಮ ಆರೋಗ್ಯಕ್ಕೆ ನಿದ್ದೆ ಎಂಬುವುದು ಎಷ್ಟು ಮುಖ್ಯವೋ ನಾವು ಮಲಗುವ.

ಭಂಗಿ ಕೂಡ ನಮ್ಮ ಆರೋಗ್ಯದ ಮೇಲೆ ಅಷ್ಟೇ ಪರಿಣಾಮ ಬೀರುತ್ತದೆ ಎಂಬುವುದು ನೀವು ತಿಳಿದಿರಲೇಬೇಕು ಸರಿಯಾದ ಭಂಗಿಯಲ್ಲಿ ಮಲಗದಿದ್ದರೆ ಬೆನ್ನು ನೋವು ಹೊಟ್ಟೆ ನೋವು ಕುತ್ತಿಗೆಯ ಸಮಸ್ಯೆ ನಿಧಾನವಾಗಿ ಹೃದಯದ ತೊಂದರೆ ಹಾಗೆ ನಿದ್ರಾಹೀನತೆ ಜೀರ್ಣಕ್ರಿಯೆಯ ಸಮಸ್ಯೆ ಎದೆಯುರಿ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ನಾವು ಆರೋಗ್ಯವಂತರಾಗಿರಲು ಯಾವ ರೀತಿ ಮಲಗುವುದು ಉತ್ತಮ ಎಂದು ಇವತ್ತಿನ ವಿಡಿಯೋದಲ್ಲಿ ತಿಳಿಯೋಣ ಬೆನ್ನ ಮೇಲೆ ಮಲಗುವುದು ಹಾಸಿಗೆಯಲ್ಲಿ ನೇರವಾಗಿ ಬೆನ್ನ ಮೇಲೆ ಮಲಗುವುದು ಅತ್ಯುತ್ತಮವಾದ ಭಂಗಿಯಾಗಿದೆ ಈ ರೀತಿ ಮಲಗುವುದರಿಂದ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ ಹಾಗೆಯೇ ಉಸಿರಾಟವೂ ಕೂಡ ಸಮರ್ಪಕವಾಗಿರುತ್ತದೆ ಈ ರೀತಿ ಮಲಗಿದಾಗ ಕೆಲವರಿಗೆ ಗೊರಕೆ ಸಮಸ್ಯೆ ಕಾಣಿಸಿಕೊಳ್ಳಬಹುದು ಇದಕ್ಕೆ ಕಾರಣ.

ಮೂಗಿನ ಒಳ ಭಾಗಗಳು ಹೆಚ್ಚು ಸಡಿಲಗೊಳ್ಳುವು ದಾಗಿದೆ ಈ ಭಂಗಿಯಲ್ಲಿ ಮಲಗುವಾಗ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ನಿಮ್ಮ ದೇಹಕ್ಕೆ ಸರಿಯಾದ ಆಧಾರ ನೀಡುವಂತಹ ಹಾಸಿಗೆ ಇದೆಯೇ ಎಂಬುವುದು ಹೊಟ್ಟೆಯ ಮೇಲೆ ಮಲಗುವುದು ಈ ರೀತಿಯ ಭಂಗಿಯಲ್ಲಿ ಮಲಗಬಾರದು ಅನ್ನಲಾಗುತ್ತದೆ ಏಕೆಂದರೆ ದೇಹದ ಒತ್ತಡ ಹೊಟ್ಟೆಯ ಮೇಲೆ ಬೀಳುತ್ತದೆ ಇದರಿಂದ ಬೆನ್ನು ನೋವು ಕುತ್ತಿಗೆಯ ನೋವು ಎದುರಾಗುವ ಸಾಧ್ಯತೆ ಇದೆ ಅಷ್ಟೇ ಅಲ್ಲ ಈ ಭಂಗಿಯಲ್ಲಿ ಮಲಗಿದ್ದರೆ ತಲೆನೋವು ಎದುರಾಗಬಹುದು ಹಾಗೆಯೇ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಈ ಭಂಗಿಯಲ್ಲಿ ಮಲಗದೆ ಇರುವುದೇ ಉತ್ತಮ ಬಲ ಮಗ್ಗುಲಲ್ಲಿ ಮಲಗುವುದು ಬಲ ಮಗ್ಗುಲಲ್ಲಿ ಮಲಗಿದರೆ ಎದೆಯುರಿ ಮತ್ತು ಹುಳಿತೇಗು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ಇದು ಅಜೀರ್ಣತೆಗೆ ಕಾರಣವಾಗಬಹುದು ಇದು ನಿಮ್ಮ.

ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಆದ್ದರಿಂದ ಬಲ ಮಗ್ಗುಲಲ್ಲಿ ಮಲಗುವುದು ಸರಿಯಾದ ವಿಧಾನವಲ್ಲ ಮಲಗುವುದು ಹಾಗಿದ್ದರೆ ಉತ್ತಮ ಆರೋಗ್ಯಕ್ಕೆ ಯಾವ ಭಂಗಿಯಲ್ಲಿ ಮಲಗಬೇಕು ಗೊತ್ತಾ ಎಡಮಗ್ಗಲಿಗೆ ಮಲಗುವುದು ಉತ್ತಮ ಎಡ ಮಗ್ಗಲಲ್ಲಿ ಮಲಗುವುದು ಅತ್ಯುತ್ತಮವಾದ ಭಂಗಿಯಾಗಿದೆ ಇನ್ನು ಬೆನ್ನು ನೋವಿನಿಂದ ಬಳಲುತ್ತಿರುವವರು ತಮ್ಮ ಎಡ ಭಾಗದಲ್ಲಿ ಮಲಗುವುದು ಹಾಗೆಯೇ ಹೃದಯವು ನಮ್ಮ ದೇಹದ ಎಡಭಾಗಕ್ಕೆ ಹೆಚ್ಚು ವಾಲಿಕೊಂಡಿದೆ ಆದ್ದರಿಂದ ಇದು ಹೃದಯದ ಆರೋಗ್ಯಕ್ಕೆ ಉತ್ತಮವಾದ ಭಂಗಿ ಎಡ ಭಾಗದಲ್ಲಿ ಮಲಗಿ ನಿದ್ದೆ ಹೋದಾಗ ಹೃದಯದ ಮೇಲೆ ಕನಿಷ್ಠ ಒತ್ತಡ ಉಂಟಾಗುತ್ತದೆ ಇದರಿಂದ ಹೃದಯದ ಕಾರ್ಯವಿಧಾನ ಸುಲಭವಾಗಿ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ.

ಇನ್ನು ಎಡ ಭಾಗದಲ್ಲಿ ಮಲಗುವುದರಿಂದ ದೇಹದ ಅಂಗಾಂಗಗಳು ಉತ್ತಮರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಅಷ್ಟೇ ಅಲ್ಲ ಮೂತ್ರಪಿಂಡ ಮತ್ತು ಯಕೃತ್ ಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಎದೆ ಉರಿ ಮತ್ತು ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ತಡೆಯುತ್ತದೆ ಬೆಳಗಿನ ಆಯಾಸ ಇಲ್ಲವಾಗಿಸುತ್ತದೆ ಪಚನಕ್ರಿಯೆಗೆ ಉತ್ತಮ ಮತ್ತು ಎಡಮಗ್ಗುಲಲ್ಲಿ ಮಲಗುವುದು ಗರ್ಭಿಣಿಯರಿಗೂ ಕೂಡ ಉತ್ತಮ ಇನ್ನು ಇಷ್ಟೆಲ್ಲ ಲಾಭವಿದೆ ಎಂದು ಒಂದೇ ಮಗ್ಗಲಲ್ಲಿ ಮಲಗದಿರಿ ಕಾರಣ ಭುಜದ ನೋವು ಬರಬಹುದು ನೋಡಿದಿರಲ್ಲ ನಿದ್ದೆ ಮಾಡುವ ಸರಿಯಾದ ಬಂಗಿ ಯಾವುದು ಎಂದು ಪ್ರಿಯ ವೀಕ್ಷಕರೇ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಶುಭದಿನ.